ನೆರೆ ಸಂತ್ರಸ್ತರ ಬಗ್ಗೆ ಸಿಎಂ ಎಲ್ಲ ಸಂಪುಟದ ಸಚಿವರಿಗೆ ವರದಿ ನೀಡಲು ಹೇಳಿದ್ದರು. ನಾವೆಲ್ಲ ಹೋಗಿ ಸ್ಥಳ ಪರಿಶೀಲನೆ ನಡೆಸಿ ಸಿಎಂ ಗೆ ವರದಿ ನೀಡಿದ್ದೇವೆ. ಕೇಂದ್ರ ಸಚಿವರಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಬಂದು ನೋಡಿ ಹೋಗಿದ್ದಾರೆ. ಮೋದಿಯವರಿಗೂ ಮನವಿ ನೀಡಿದ್ದೇವೆ. ಕೇಂದ್ರ ಕೂಡ ಅಧಿಕಾರಿಗಳನ್ನು ಕಳಿಸಿ ವರದಿ ಸಿದ್ದಪಡಿಸಿದೆ. ಮೋದಿ ಆದಷ್ಟು ಬೇಗ ಪರಿಹಾರ ನೀಡಲಿದ್ದಾರೆ. ಆದರೂ ಇದರಲ್ಲಿ ಕಾಂಗ್ರೆಸ್ ನಾಯಕರು ರಾಜಕಾರಣ ಮಾಡ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.