ಹೋಮ್ » ವಿಡಿಯೋ » ರಾಜ್ಯ

ನಿಮಿಷಗಟ್ಟಲೆ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ

ರಾಜ್ಯ08:52 PM IST Feb 04, 2018

ಬೆಂಗಳೂರು(ಫೆ. 04): ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದ ಆರಂಭ ಮತ್ತು ಅಂತ್ಯದಲ್ಲಿ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು. "ಕರ್ನಾಟಕದ ನನ್ನ ಪ್ರೀತಿಯ ಬಂಧು-ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು. ನಾಡಪ್ರಭು ಕೆಂಪೇಗೌಡ, ಮಹಾತ್ಮ ಬಸವೇಶ್ವರ, ಶರಣ ಮಾದಾರ ಚೆನ್ನಯ್ಯ, ರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂತ ಶಿಶುನಾಳ ಷರೀಫ, ಸರ್. ಎಂ ವಿಶ್ವೇಶ್ವರಯ್ಯರಂತಹ ಮಹಾ ಪುರುಷರ ನಾಡು ಕರ್ನಾಟಕ. ನವ ಕರ್ನಾಟಕ ನಿರ್ಮಾಣ ಮಾಡಿ, ಪರಿವರ್ತನೆ ಮಾಡಿ, ಬಿಜೆಪಿ ಗೆಲ್ಲಿಸಿ,” ಎಂದು ಕನ್ನಡದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ವಿಶೇಷವೆಂದರೆ, ಭಾಷಣದ ಅಂತ್ಯವನ್ನೂ ಕನ್ನಡದ ಮೂಲಕವೇ ಮೋದಿ ಮಾಡಿದರು. ಕನ್ನಡದ ಗಂಧವೇ ಇಲ್ಲದ ಮೋದಿ ಇಷ್ಟು ಚೆನ್ನಾಗಿ ಕನ್ನಡ ಹೇಗೆ ಮಾತನಾಡಿದರೆಂದು ಅಚ್ಚರಿ ಪಡುವವರಿಗೆ ಇಲ್ಲಿದೆ ಉತ್ತರ. ಮೋದಿ ಅವರು ಟೆಲಿಪ್ರಾಂಪ್ಟರ್ ಸಹಾಯದಿಂದ ಕನ್ನಡದಲ್ಲಿ ಮಾತನಾಡಿದ್ದರು.

webtech_news18

ಇತ್ತೀಚಿನದು Live TV