ಹೋಮ್ » ವಿಡಿಯೋ » ರಾಜ್ಯ

ಮಾವಿನ ಕಾಯಿ ಕೆಂಪಾದಾಗ ಮಾತ್ರ ಕಲ್ಲು ಹೊಡೆಯುತ್ತಾರೆ; ಬಿಜೆಪಿ ಟಾರ್ಗೆಟ್​​ಗೆ ಡಿಕೆಶಿ ತಿರುಗೇಟು

ರಾಜ್ಯ03:31 PM IST May 14, 2019

ಬಿಜೆಪಿಯವರು ಡಿಕೆಶಿ ಟಾರ್ಗೆಟ್ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರ ಕೆಲಸ ಅವರು ಮಾಡ್ತಿದ್ದಾರೆ, ತಪ್ಪಂತ ಹೇಳಲ್ಲ. ಮಾವಿನ ಕಾಯಿ ಕೆಂಪಾದಾಗ ಮಾತ್ರ ಕಲ್ಲು ಹೊಡೆದು ಬೀಳಿಸಲು ಪ್ರಯತ್ನಿಸ್ತಾರೆ. ಹೆಚ್ಚು ಕೆಲಸ ಮಾಡುವವರು, ಪಕ್ವವಾಗಿರುವವರು ಅಂದರೆ ಕಣ್ಣು ಜಾಸ್ತಿ. ಎಚ್. ವಿಶ್ವನಾಥ್ ಹೇಳಿಕೆಯಿಂದ ಏನೂ ಡ್ಯಾಮೇಜ್ ಆಗಲ್ಲ. ರಾಹುಲ್ ಗಾಂಧಿ ಕೊಟ್ಟ ದೀಕ್ಷೆ ನಾನು ಮತ್ತು ಸಿದ್ದರಾಮಯ್ಯ ಫಾಲೋ ಮಾಡ್ತೀವಿ‌. ದೇವೇಗೌಡರು ಕೊಟ್ಟ ದೀಕ್ಷೆ ವಿಶ್ವನಾಥ್ ಸೇರಿದಂತೆ ಮಿಕ್ಕಿದ ಮುಖಂಡರು ಫಾಲೋ ಮಾಡ್ತಾರೆ. ಯಡಿಯೂರಪ್ಪನವರು ಪಾಪ ಮತದಾರರಿಗೆ ಸುಮ್ಮನೆ ಆಸೆ ತೋರಿಸ್ತಿದ್ದಾರೆ. ಸಿಎಂ ಆಗೋದೆ ಆಗೋದೆ, ಸರ್ಕಾರ ಬಂತು ಬಂತು ಅಂತಿದ್ದಾರೆ. ಸುಮ್ನೆ ಆಸೆ, ಪಾಪ ಖುಷಿ ಪಡಲಿ ಬಿಡಿ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಭೇಟಿಯಾಗದ ವಿಚಾರವಾಗಿ ಮಾತನಾಡಿದ ಡಿಕೆಶಿ, ಅವರು ಬರೋ ಟೈಮ್ ಇವರು ಹೋಗೋ ಟೈಮ್ ಸರಿಯಾಗಿಲ್ಲ ಅಷ್ಟೇ. ನಾನು ಫೋನಲ್ಲೇ ಮಾತಾಡ್ದೆ ಅವರು ಫೋನಲ್ಲೇ ಮಾತಾಡಿದ್ದಾರೆ ಎಂದು ತಿಳಿಸಿದರು.

sangayya

ಇತ್ತೀಚಿನದು Live TV