ವಿಜಯಪುರ(ಡಿ.19): ಮಾಜಿ ಸಚಿವ ಯು. ಟಿ. ಖಾದರ್, ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿ ಅವರಿಗೆ ದೇಶದ ಬಗ್ಗೆ ಗೌರವ ಇಲ್ಲಿ ಆಗುವುದಿಲ್ಲ ಎಂದಾದರೆ ಅವರೆಲ್ಲರು ಪಾಕಿಸ್ತಾನಕ್ಕೆ ಹೋಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದ್ದಾರೆ.ವಿಜಯಪುದಲ್ಲಿ ಮಾತನಾಡಿದ ಅವರು, ಇವರಿಗೆ ಮಾನ ಮರ್ಯಾದೆ ಇದ್ದರೆ ದೇಶಕ್ಕೆ ಗೌರವ ತರುವ ಕೆಲಸ ಮಾಡಲಿ. ಅದನ್ನು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡುವುದಾದರೆ ಇಂಥವರ ನಡವಳಿಕೆ, ಚಟುವಟಿಕೆಗಳ ಮೇಲೆ ಗುಪ್ತಚರ ಇಲಾಖೆ ನಿರಂತರ ನಿಗಾ ಇಡಲಿ ಎಂದು ಆಗ್ರಹಿಸಿದ್ದಾರೆ.