ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ: ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ

ರಾಜ್ಯ04:40 PM IST Jan 17, 2019

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಅವರು ತಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದೊಳಗೆ ಕೆಲ ವಿಚಾರಗಳಲ್ಲಿ ತನಗೆ ಅಸಮಾಧಾನ ಇರುವುದು ನಿಜ. ಅದೆಲ್ಲವನ್ನೂ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡುತ್ತೇನೆ. ಅಪ್ಪನ ಮೇಲೆ ಮಕ್ಕಳು ಸಿಟ್ಟಾಗುವುದು ಸಹಜ ತಾನೇ..? ಹಾಗಂತ ಮಕ್ಕಳು ಮನೆ ಬಿಟ್ಟು ಹೋಗುತ್ತಾರಾ ಎಂದು ಶಿವರಾಮ್ ಹೆಬ್ಬಾರ್ ಹೇಳುತ್ತಾರೆ. ತಾನು ಸಚಿವಾಕಾಂಕ್ಷಿಯೂ ಹೌದು. ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ. ಅದು ತಮ್ಮ ಹಕ್ಕು. ಆ ಹಕ್ಕನ್ನು ಕೇಳಿಯೇ ಕೇಳುತ್ತೇವೆ. ಕೊಡದಿದ್ದರೆ ತಾನು ಪಕ್ಷ ಬಿಡುವುದಿಲ್ಲ. ಬಿಜೆಪಿ ಸೇರುವ ಮಾತೇ ಇಲ್ಲ ಎಂದು ಯಲ್ಲಾಪುರ ಶಾಸಕರು ತಿಳಿಸಿದ್ದಾರೆ.

sangayya

ಇತ್ತೀಚಿನದು Live TV