ವಿಜಯಪುರ: ರಾಜ್ಯ ಸರಕಾರದ ವಿರುದ್ಧ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ. ಇತ್ತಿಚೆಗೆ ಯಾಕೋ ತಾವು ಮಾತನಾಡುವುದರಲ್ಲಿ ನಿರಾಸಕ್ತಿ ತೋರುತ್ತಿದ್ದಿರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಅಸಮಾಧಾನ ಹೊರ ಹಾಕಿದ ಮಾಜಿ ಸಿಎಂ, ಆಗ ಸರಕಾರ ನಡೆಸುತ್ತಿದ್ದವನು ನಾನು ಅದಕ್ಕೆ ಮಾತನಾಡುತ್ತಿದ್ದೆ. ಈಗ ನಾನು ಕೇವಲ ಸಮನ್ವಯ ಸಮಿತಿ ಅಧ್ಯಕ್ಷ. ಈಗ ಅಷ್ಟು ಮಾತನಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.