ಹೋಮ್ » ವಿಡಿಯೋ » ರಾಜ್ಯ

ಸರ್ವಾಧಿಕಾರಿ ಧೋರಣೆ ಇರುವ ಮೋದಿಗೂ ಹಿಟ್ಲರ್​ಗೂ ವ್ಯತ್ಯಾಸವಿಲ್ಲ; ಸಿದ್ದರಾಮಯ್ಯ

ರಾಜ್ಯ15:54 PM January 08, 2020

ಬೆಂಗಳೂರು (ಜ. 8): ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕ್ರೂರಿಗಳು. ಸರ್ವಾಧಿಕಾರಿತನದ ವರ್ತನೆ ಇರುವವರೆಲ್ಲ ನಂತರ ಕ್ರೂರಿಗಳಾಗುತ್ತಾರೆ. ಹಿಟ್ಲರ್ ಮನಸ್ಥಿತಿಯವರು ಮಾತ್ರ ಈ ರೀತಿ ನಡೆದುಕೊಳ್ಳಲು ಸಾಧ್ಯ ಎಂದು ಪ್ರಧಾನಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ. ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಕೊನೆಯ ದಿನಗಳಲ್ಲಿ ಕ್ರೂರಿಯಾಗಿದ್ದ. ನರೇಂದ್ರ ಮೋದಿ ಕೂಡ ಅದೇ ರೀತಿ ವರ್ತಿಸುತ್ತಿದ್ದಾರೆ. ಅದೇ ಕಾರಣಕ್ಕೆ ಮೋದಿ ಮತ್ತು ಶಾ ಇಬ್ಬರೂ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿಯನ್ನು ಸಿದ್ದರಾಮಯ್ಯ ಹಿಟ್ಲರ್​ಗೆ ಹೋಲಿಸಿದ್ದಾರೆ.

webtech_news18

ಇತ್ತೀಚಿನದು Live TV