ಗಾರ್ಡನ್ ಸಿಟಿ ಬೆಂಗ್ಳೂರಲ್ಲೀಗ ಮನೆಯೊಳಗೆ, ಆಫೀಸಲ್ಲಿ ಎಸಿ ಇಲ್ಲ ಅಂದ್ರೆ ಇರೋಕೇ ಆಗಲ್ಲಪ್ಪಾ ಅನ್ನೋ ಪರಿಸ್ಥಿತಿ ಅನೇಕರದ್ದು. ಹೆಲ್ಮೆಟ್ ಬೇರೆ ಕಡ್ಡಾಯ ಮಾಡಿರೋದರಿಂದ ಬಿಸಿಲ ತಾಪ ಇನ್ನೂ ಜೋರಾಗಿ ಜನರನ್ನು ತಟ್ಟುತ್ತಿದೆ. ಇದಕ್ಕಾಗಿ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬರು ಎಸಿ ಹೆಲ್ಮೆಟ್ ಕಂಡುಹಿಡಿದಿದ್ದಾರೆ. ಈ ಹೆಲ್ಮೆಟ್ ಹೇಗಿರಲಿದೆ ಎಂಬ ಬಗ್ಗೆ ನ್ಯೂಸ್18 ಕನ್ನಡ ವರದಿಗಾರ್ತಿ ಸೌಮ್ಯ ಕಳಸ ಸಿದ್ಧಪಡಿಸಿರುವ ವರದಿ ಇಲ್ಲಿದೆ.