ಹೋಮ್ » ವಿಡಿಯೋ » ರಾಜ್ಯ

ಅತ್ಯಲ್ಪ ಅವಧಿಯಲ್ಲೇ ನಂ. 2 ಆದ News18 ಕನ್ನಡ ಜಾಲತಾಣ

ದೇಶ-ವಿದೇಶ16:52 PM May 29, 2019

ಬೆಂಗಳೂರು: ಡಿಜಿಟಲ್ ಸ್ಪೇಸ್ನ ಪ್ರಾಬಲ್ಯಕ್ಕಾಗಿ ಅಪರಿಮಿತ ಪೈಪೋಟಿ ಇದೆ. ಕನ್ನಡ ಸೇರಿದಂತೆ ಪ್ರತಿಯೊಂದು ಭಾರತೀಯ ಭಾಷೆಯಲ್ಲೂ ದಿನವೂ ಒಂದಿಲ್ಲೊಂದು ಹೊಸ ವೆಬ್​ಸೈಟ್​ಗಳು ತಲೆ ಎತ್ತುತ್ತಲೇ ಇವೆ. ಭಾರತದ ಅತ್ಯಂತ ಪ್ರಮುಖ ಡಿಜಿಟಲ್ ಗ್ರೂಪ್​ಗಳಲ್ಲೊಂದೆನಿಸಿದ ನೆಟ್​ವರ್ಕ್18ನ ಜಾಲತಾಣಗಳು ಈ ವರ್ಷ ಗಮನಾರ್ಹ ಸಾಧನೆ ಮಾಡಿವೆ. ಭಾರತೀಯ ಭಾಷೆಗಳ ವಿಚಾರದಲ್ಲಿ ನೆಟ್ವರ್ಕ್18 ಭಾರತದಲ್ಲಿ ಎರಡನೇ ಸ್ಥಾನಕ್ಕೇರಿದೆ. ಕಾಮ್​ಸ್ಕೋರ್ ರೇಟಿಂಗ್ ಪ್ರಕಾರ, ಟೈಮ್ಸ್ ಆಫ್ ಇಂಡಿಯಾ ಸಮೂಹದ ವೆಬ್​ಸೈಟ್​ಗಳ ನಂತರದ ಸ್ಥಾನವನ್ನು ನೆಟ್​ವರ್ಕ್18 ಅಲಂಕರಿಸಿದೆ. ಕನ್ನಡ ಡಿಜಿಟಲ್ ಮೀಡಿಯಾ ಮಟ್ಟದಲ್ಲಿ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ನ್ಯೂಸ್18 ಕನ್ನಡ ಜಾಲತಾಣ ಕೂಡ ಕಳೆದ ಕೆಲ ತಿಂಗಳಿನಿಂದ ಅದ್ಭುತ ಪ್ರಗತಿ ತೋರಿದ್ದು ಪ್ರಜಾವಾಣಿ ನಂತರದ ನಂ. 2 ಸ್ಥಾನಕ್ಕೇರಿದೆ. ಈ ಹಾದಿಯಲ್ಲಿ ವಿಜಯಕರ್ನಾಟಕ, ಕನ್ನಡ ಪ್ರಭ ವೆಬ್​ಸೈಟ್​ಗಳನ್ನ ಹಿಂದಕ್ಕೆ ಹಾಕಿದೆ. ವಿಶ್ವಾಸಾರ್ಹ ಸುದ್ದಿಗಳ ಮೂಲಕ ಡಿಜಿಟಲ್ ನ್ಯೂಸ್ ಕ್ಷೇತ್ರದಲ್ಲಿ ನೆಟ್​ವರ್ಕ್18 ಓದುಗರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇದೇ ಸ್ಫೂರ್ತಿಯಲ್ಲಿ ಇನ್ನಷ್ಟು ಗಟ್ಟಿ ಹೆಜ್ಜೆಗಳನ್ನ ಇಟ್ಟು ದೇಶದ ನಂಬರ್ ಒನ್ ಸ್ಥಾನ ಅಲಂಕರಿಸುವ ಗುರಿ ಇಡಲಾಗಿದೆ.

sangayya

ಇತ್ತೀಚಿನದು Live TV

Top Stories