Home »
state »

narendra-modi-is-the-most-popular-person-after-mahatma-gandhi-says-pratap-simha

ಮಹಾತ್ಮ ಗಾಂಧಿ ನಂತರ ಅಷ್ಟು ಜನಪ್ರಿಯರಾದ ವ್ಯಕ್ತಿ ಎಂದರೆ ಮೋದಿಯೇ: ಪ್ರತಾಪ್ ಸಿಂಹ

ಮೈಸೂರು: ಇಂದಿರಾ ಗಾಂಧಿ ಅವರಿದ್ದಾಗ ಅವರ ಹೆಸರಲ್ಲಿ ಚುನಾವಣೆಗಳನ್ನ ಗೆಲ್ಲುತ್ತಿದ್ದರು. ಈಗ ಮೋದಿ ಹೆಸರಲ್ಲಿ ಚುನಾವಣೆ ಗೆಲ್ಲುತ್ತಿದ್ದೇವೆ. ಮಹಾತ್ಮ ಗಾಂಧಿ ನಂತರ ಅವರಷ್ಟು ಜನಪ್ರಿಯರಾದ ವ್ಯಕ್ತಿ ಎಂದರೆ ನರೇಂದ್ರ ಮೋದಿ ಅವರೆಯೇ ಎಂದು ಮೈಸೂರು-ಕೊಡಗು ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ. ಪ್ರತಾಪ್ ಸಿಂಹ ತಮ್ಮ ಗೆಲುವನ್ನು ತಾಯಿ ಚಾಮುಂಡೇಶ್ವರಿಗೆ ಸಮರ್ಪಿಸಿದ್ದಾರೆ. ತಾಯಿ ಚಾಮುಂಡೇಶ್ವರಿ, ತಾಯಿ ಕಾವೇರಿ ಹಾಗು ಇಗ್ಗುತ್ತಪ್ಪ ದೇವರಿಗೆ ಈ ಗೆಲುವು ಸಮರ್ಪಣೆ ಮಾಡುತ್ತೇನೆ. ಚಾಮುಂಡೇಶ್ವರಿ ನನ್ನ ಕೈಬಿಡಲ್ಲ ಎಂದು ಗೊತ್ತಿತ್ತು ಎಂದು ಪ್ರತಾಪ್ ಸಿಂಹ ಹೇಳಿದ್ಧಾರೆ. ಇದು ಮೋದಿ ಹಾಗೂ ಕಾರ್ಯಕರ್ತರಿಗೆ ಸಂದ ಗೆಲುವಾಗಿದೆ. ಕಳೆದ ಬಾರಿ ಮೋದಿ ನೋಡಿ ಜನರು ಮತ ಹಾಕಿದ್ದರು. ಈಗ ಮೋದಿ ಜೊತೆಗೆ ನನ್ನ ಕೆಲಸ ನೋಡಿದ್ದಾರೆ. ನಮ್ಮೆಲ್ಲಾ ನಾಯಕರೂ ಸಹಕಾರ ನೀಡಿದ್ದಾರೆ. ಅವರ ಶ್ರಮಕ್ಕೆ ಧನ್ಯವಾದ ಹೇಳುತ್ತೇನೆ. ಇಷ್ಟು ಅಂತರದ ಗೆಲುವನ್ನು ನಿರೀಕ್ಷಿಸಿರಲಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಇತ್ತೀಚಿನದುLIVE TV