Vijayadashami 2019: ಮೈಸೂರು: ನವರಾತ್ರಿಯ ಕೊನೆಯ ದಿನವಾದ ಇಂದು ಮೈಸೂರಿನಲ್ಲಿ ಮುಷ್ಠಿ ಕಾಳಗ ನಡೆದಿದೆ. ಅರಮನೆಯ ವರಹ ದೇವಾಲಯದಲ್ಲಿ ವಜ್ರಮುಷ್ಠಿ ಕಾಳಗ ಕಾಳಗ ನಡೆಯಿತು. ರಕ್ತ ಸುರಿಯುವವರೆಗೂ ಹೊಡೆದಾಡಿದರು. ರಾಮನಗರದ ನರಸಿಂಹ ಜಟ್ಟಿ ವಿರುದ್ಧ ಮೈಸೂರಿನ ಬಲರಾಮ ಜಟ್ಟಿ ಕಾಳಗ ನಡೆಯಿತು. ಬೆಂಗಳೂರಿನ ನಾರಾಯಣ ಜಟ್ಟಿ ವಿರುದ್ಧ ಚಾಮರಾಜನಗರದ ಗಿರೀಶ್ ಜಟ್ಟಿ ಕಾಳಗ ನಡೆಸಲಿದ್ದು, ಅರಮನೆಯ ಸವಾರಿ ತೊಟ್ಟಿ ಜಟ್ಟಿಕಾಳಗ ನಡೆದಿದೆ. ರೋಚಕ ವಜ್ರಮುಷ್ಠಿ ಕಾದಾಟವನ್ನು ತ್ರಿಷಿಕಾ ಒಡೆಯರ್ ವೀಕ್ಷಣೆ ಮಾಡಿದರು.