ಆಯುಧ ಪೂಜೆ ಹಿನ್ನೆಲೆ ಸಂಸದೆ ಶೋಭಾ ಕರಂದ್ಲಾಜೆ ಇಂದು ಅರಮನೆಯಲ್ಲಿ ದಸರಾ ಆನೆಗಳಿಗೆ ಪೂಜೆ ವಿಶೇಷ ಪೂಜೆ ಮಾಡಿದರು. ಅರಮನೆ ಸಂಪ್ರದಾಯದಂತೆ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದಸರಾ ಮೆರವಣಿಗೆಯಲ್ಲಿ ಸುಗಮವಾಗಿ ಆನೆಗಳು ಸಾಗಲಿ ಎಂದು ಪೂಜೆ ಮಾಡಲಾಗುತ್ತದೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 11 ಆನೆಗಳಿಗೆ ಅಕ್ಕಿ, ಬೆಲ್ಲ,ಕಬ್ಬು ತಿನ್ನಿಸಿ ಸತ್ಕಾರ ಮಾಡಿ, ಪೂಜೆ ನೆರವೇರಿಸಲಾಯಿತು.