ಹೋಮ್ » ವಿಡಿಯೋ » ರಾಜ್ಯ

ಪಕ್ಷಕ್ಕೆ ತೋರಿದ ನಿಷ್ಠೆಯನ್ನು ಹೆಂಡತಿ-ಮಕ್ಕಳ ಮೇಲೇಕೆ ತೋರಲಿಲ್ಲ?; ಜೆಡಿಎಸ್​ ಶಾಸಕ ಕೆ. ಮಹದೇವ್​ಗೆ ಮಗಳ ಪ್ರಶ್ನೆ

ರಾಜ್ಯ13:14 PM July 05, 2019

ಬಿಜೆಪಿಗೆ ಸೇರಲು ಪಿರಿಯಾಪಟ್ಟಣ ಜೆಡಿಎಸ್​ ಶಾಸಕ ಕೆ. ಮಹದೇವ್ ಅವರಿಗೆ 40 ಕೋಟಿ ರೂ. ಆಮಿಷವೊಡ್ಡಿದ್ದರೂ ಅದನ್ನು ತಿರಸ್ಕರಿಸಿ ಪಕ್ಷನಿಷ್ಠೆ ತೋರಿದ್ದರು. ಮಹದೇವ್ ಅವರ ಮೊದಲ ಪತ್ನಿಯ ಮಗಳು ಮಾಲತಿ ಈ ಬಗ್ಗೆ ವಿಡಿಯೋ ರೆಕಾರ್ಡ್​ ಮಾಡಿದ್ದು, ಪಕ್ಷನಿಷ್ಠೆ ತೋರಿದ ನೀವು ಹೆಂಡತಿ, ಮಕ್ಕಳನ್ನು ಯಾಕೆ ಕೀಳಾಗಿ ನಡೆಸಿಕೊಂಡಿರಿ? ಎಂದು ಪ್ರಶ್ನಿಸಿದ್ದಾರೆ. 40 ಕೋಟಿ ರೂ. ಆಫರ್​ ಬಂದರೂ ಅದನ್ನು ಬೇಡ ಎಂದಿರಿ. ಆದರೆ, ನಿಮ್ಮ ಹೆಂಡತಿ- ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ಹೋಗಿದ್ದೀರಿ. ಬೆಳೆದುನಿಂತ ಮಗಳು ಬೇಡಿಕೊಂಡಾಗ ನಿಮ್ಮ ನಿಷ್ಠೆ ಎಲ್ಲಿ ಹೋಗಿತ್ತು? ಎಂದು ಕೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

sangayya

ಇತ್ತೀಚಿನದು Live TV

Top Stories