ಕಲಬುರ್ಗಿ ಸೇರಿ ರಾಜ್ಯದಲ್ಲಿ ಬಿಜೆಪಿ 22 ಸೀಟು ಗೆಲ್ಲೋದು ಖಚಿತ. ಫಲಿತಾಂಶದ ಬಳಿಕ ರಾಜ್ಯದಲ್ಲಿ ದೊಡ್ಡ ಭೂಕಂಪ ಆಗುವುದು ಖಚಿತ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ದುಶ್ಶಾಸನ, ದುರ್ಯೋಧನ ಎಲ್ಲವೂ ಆಗಿದ್ದಾರೆ. ಅವರ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಸೋಲಲಿದ್ದಾರೆ. ಬಿಜೆಪಿ ನಾಯಕರು ಭಸ್ಮಾಸುರ ಎಂದು ಹೇಳುತ್ತಾರೆ. ಭಸ್ಮಾಸುರ ಯಾರೆಂದು ಫಲಿತಾಂಶದ ಬಳಿಕ ಗೊತ್ತಾಗುತ್ತೆ. ಮಗನ ಮೇಲಿನ ವ್ಯಾಮೋಹಕ್ಕೆ ಪಕ್ಷ ತುಳಿಯುತ್ತಾ ಬಂದಿದ್ದಾರೆ. ಅದರ ಫಲವನ್ನು ಮಲ್ಲಿಕಾರ್ಜುನ ಖರ್ಗೆ ಉಣ್ಣುತ್ತಾರೆ. ಸೋಲರಿಯದ ಸರದಾರ ಸೋಲುವುದು ಖಚಿತ ಎಂದು ವ್ಯಂಗ್ಯ ಮಾಡಿದರು.