ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಜಾಂಬೋಟಿ ರಸ್ತೆಯಲ್ಲಿ ಸೇತುವೆ ಹಾಳಾಗಿ ಸಂಚಾರಕ್ಕೆ ಅಡೆತಡೆಯಾಗಿತ್ತು. ಜಾಂಬೋಟಿ ರಸ್ತೆ ಭಾರಿ ವಾಹನ ಸಂಚಾರದಿಂದ ಹಲವು ಸಮಸ್ಯೆ ಉಂಟಾಗುತ್ತಿತ್ತು. ಎಚ್ಚರಿಕೆ ನಡುವೆ ಜಾಂಬೋಟಿ ಮಾರ್ಗವಾಗಿ ಗೋವಾಗೆ ಹೋಗಲು ಲಾರಿ ಚಾಲಕ ಯತ್ನಿಸಿದ್ದಾನೆ. ರಸ್ತೆ ಮಧ್ಯ ನಿಲ್ಲಿಸಿ ವಾಪಾಸ್ ಹೋಗು. ಇಲ್ಲದಿದ್ದರೆ ಲಾರಿ ಪಂಚರ್ ಮಾಡುತ್ತೇನೆ ಎಂದು ಲಾರಿ ಚಾಲಕನ ವಿರುದ್ಧ ಖಾನಾಪುರ ಶಾಸಕಿ ಅಂಜಲಿ ಲಿಂಬಾಳ್ಕರ್ ಗರಂ ಆಗಿದ್ದಾರೆ.