ಬೆಂಗಳೂರು: ಕಾಂಗ್ರೆಸ್ ಪಕ್ಷ ಈಗ ಅಪ್ರಸ್ತುತ ಆಗಿದೆ. ಕಾಂಗ್ರೆಸ್ ನಾಯಕತ್ವ ಅನರ್ಹರ ಕೈ ಸೇರಿದೆ. ಪಕ್ಷದಲ್ಲಿ ಹಿರಿಯ ನಾಯಕರ ಕಡೆಗಣನೆ ಆಗುತ್ತಿದೆ. ನನಗೆ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡವರ ಮೇಲೆ ಸಾಕಷ್ಟು ಅಸಮಾಧಾನ ಇದೆ. ಹಿಂದೆ ಚುನಾವಣೆ ಮತ್ತು ರಾಜಕಾರಣದಿಂದ ದೂರ ಉಳಿಯುತ್ತೇನೆ ಎಂದಿದ್ದು ನಿಜ, ಈಗಲೂ ಅದಕ್ಕೆ ಬದ್ದ ಎಂದು ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.