ಹೋಮ್ » ವಿಡಿಯೋ » ರಾಜ್ಯ

ಸಾಯುವ ಎರಡು ದಿನಕ್ಕೂ ಮೊದಲು ಕಾಶಿನಾಥ್ ಹೇಳಿದ ಕೊನೆಯ ಡೈಲಾಗ್ ಇದು!

ಟ್ರೆಂಡ್03:02 PM IST Jan 18, 2018

ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳಲಗ್ಲಿ ನಟಿಸಿದ್ದ ಇವರು 16 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ ಇವರು ಕಳೆದೆರಡು ದಿನಗಳ ಹಿಂದೆ ತನ್ನ ಕೊನೆಯ ಸಿನಿಮಾ ಓಳ್ ಮುನಿಸ್ವಾಮಿಯ ಡಬ್ಬಿಂಗ್​ ಮಾಡುವ ವೇಳೆ ಹೇಳಿದ ಡೈಲಾಗ್ ಮಾತ್ರ ಇವರಿಗೆ ತನ್ನ ಸಾವಿನ ಮುನ್ಸೂಚನೆ ಸಿಕ್ಕಿತ್ತಾ ಎಂಬ ಯೋಚನೆ ಬರುವಂತೆ ಮಾಡಿದೆ. "ಕಂಟೆಂಟ್​ ಇದ್ಮೇಲೆ ಕಟೌಟ್ ಯಾಕ್ರೋ ಬೇಕು? ಗಂಟೆ, ಜಾಗಟೆ, ತಮಟೆ ಎಲ್ಲಾ ರೆಡಿ ಮಾಡ್ಕೊಳ್ಳಿ, ಸದ್ಯಕ್ಕೆ ನಿಮ್ಮೂರಿಗೂ ಬರ್ತಿದ್ದೀನಿ" ಈ ಡಬ್ಬಿಂಗ್ ನಡೆದ ಎರಡೇ ದಿನಗಳಲ್ಲಿ ನಟ ಕಾಶಿನಾಥ್ ಇಹಲೋಕ ತ್ಯಜಿಸಿದ್ದಾರೆ. ಕಾಶಿನಾಥ್​ರವರು ಮಾಡಿದ ಈ ಡಬ್ಬಿಂಗ್ ವಿಚಾರವಾಗಿ ತಮ್ಮ ಅನುಭವ ಹಂಚಿಕೊಂಡ ಸಿನಿಮಾ ನಿರ್ದೇಶಕರು 'ನಮ್ಮ ಸ್ಕ್ರಿಪ್ಟ್​ನಲ್ಲಿ ಈ ಡೈಲಾಗ್​ ಇರಲಿಲ್ಲ. ಅವರೇ ಖುದ್ದಾಗಿ ಇದನ್ನು ಸೇರಿಸಿಕೊಳ್ಳಿ ಎಂಬ ಸಲಹೆ ನೀಡಿದ್ದರು. ಅಲ್ಲದೇ ಹೀಗೇ ಡೈಲಾಗ್ ಬರೆಯಿರಿ ಎಂದು ತಿಳಿಸಿದ್ದರು' ಎಂಬುವುದಾಗಿ ಹೇಳಿಕೊಂಡಿದ್ದಾರೆ.

webtech_news18

ಇತ್ತೀಚಿನದು Live TV