ಒತ್ತುವರಿ ಹೆಸರಿನಲ್ಲಿ ಬಡವರ ಮನೆಯ ಮೇಲೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಣ್ಣು ಸುರಿದು ಸರ್ಕಾರಿ ಜಮೀನಿನಲ್ಲಿ ವಾಸವಿರುವ 3 ಬಡ ಕುಟುಂಬಗಳ ಮೇಲೆ ದರ್ಬಾರು ನಡೆಸಿರುವ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸ್ವೀಕರಿಸಿಲ್ಲ. ನೋಟಿಸ್ ಕೂಡ ನೀಡದೆ ಜೆಸಿಬಿ ಮೂಲಕ ಅಧಿಕಾರಿಗಳು ದರ್ಬಾರ್ ನಡೆಸಿದ್ದಾರೆ. ಇದರಿಂದ ಅಡಕೆ- ತೆಂಗು ಸೇರಿದಂತೆ ರೈತರ ಬೆಳೆ ಸಂಪೂರ್ಣ ನೆಲಸಮವಾಗಿದೆ.