ಹೋಮ್ » ವಿಡಿಯೋ » ರಾಜ್ಯ

20 ಸಾವಿರ ಮತ ಅಂತರಿಂದ ಗೆಲ್ಲುತ್ತೇನೆ: ಕುಂದಗೋಳ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್ ವಿಶ್ವಾಸ

ರಾಜ್ಯ17:43 PM April 29, 2019

ಧಾರವಾಡ: ಪತಿಯ ಸಾವಿನ ಅನುಕಂಪದ ಅಲೆಯ ಮೇಲೆ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಯತ್ನಿಸುತ್ತಿದ್ದಾರೆ. ಆದರೆ, ಅವರಿಗಿಂತ 10 ಪಟ್ಟು ಹೆಚ್ಚು ಅನುಕಂಪ ನಮ್ಮ ಮೇಲಿದೆ ಎಂದು ಕುಂದಗೋಳದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್ ಹೇಳಿದ್ದಾರೆ. ಇದೇ ವೇಳೆ, ಈ ಬಾರಿಯ ಚುನಾವಣೆಯಲ್ಲಿ ತಾನು 15-20 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ಕಳೆದ ಬಾರಿ ತಾನು ಕೇವಲ 634 ಮತಗಳ ಅಂತರದಿಂದ ಸೋತಿದ್ದೆ. ಈ ಹಿಂದೆ ಶಾಸಕನಾಗಿ ತಾನು ಮಾಡಿದ ಕೆಲಸಗಳು ಈ ಬಾರಿ ತನ್ನ ಕೈ ಹಿಡಿಯಲಿವೆ. ಹೆಚ್ಚು ಮತಗಳ ಅಂತರದಿಂದ ತಾನು ಗೆಲ್ಲುವುದಾಗಿ ಚಿಕ್ಕನಗೌಡರ್ ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು Live TV

Top Stories