ಹೋಮ್ » ವಿಡಿಯೋ » ರಾಜ್ಯ

ನಿಮ್ಮದು ನಾಲಿಗೆಯಾ ಚಪ್ಪಲಿಯಾ?: ಮಂಗಳಮುಖಿಯರಿಗೆ ಅವಹೇಳನ ಮಾಡಿದ ಈಶ್ವರಪ್ಪ ವಿರುದ್ಧ ಆಕ್ರೋಶ

ರಾಜ್ಯ18:09 PM September 27, 2019

ಬೆಂಗಳೂರು: ಮುಸ್ಲಿಮರ ಮತ ಪಡೆಯುವ ಶಾಸಕರು ಹಿಜಡಾಗಳು ಎಂದು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪ ವಿರುದ್ಧ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಮಹಿಳಾ ಘಟಕದ ಮುಖ್ಯಸ್ಥೆ ಪುಷ್ಪಾ ಅಮರನಾಥ್ ಅವರು ಮಾತನಾಡುತ್ತಾ, ನಿಮ್ಮದು ನಾಲಗೆಯಾ ಅಥವಾ ಚಪ್ಪಲಿಯಾ ಎಂದು ಈಶ್ವರಪ್ಪರನ್ನು ಕೇಳಬೇಕಾಗುತ್ತದೆ. ನಾಲಗೆ ಇದೆ ಎಂದು ಬಾಯಿಗೆ ಬಂದಂಗೆ ಮಾತನಾಡುತ್ತೀರಲ್ಲ. ಮಂಗಳಮುಖಿಯರಿಗೂ ಒಂದು ಗೌರವ ಇರುವುದು ಗೊತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ತಮ್ಮ ಹೇಳಿಕೆಗೆ ಈಶ್ವರಪ್ಪ ಕ್ಷಮೆಯಾಚಿಸದಿದ್ದರೆ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಪುಷ್ಪಾ ಎಚ್ಚರಿಕೆ ನೀಡಿದ್ದಾರೆ. ಈಶ್ವರಪ್ಪ ಮನೆ ಮುಂದೆ ನಡೆದ ಈ ಪ್ರತಿಭಟನೆಯಲ್ಲಿ ಹಲವು ಮಂಗಳಮುಖಿಯರೂ ಪಾಲ್ಗೊಂಡಿದ್ದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading