ಹೋಮ್ » ವಿಡಿಯೋ » ರಾಜ್ಯ

ದಲಿತ ವ್ಯಕ್ತಿ ಕಟ್ಟಿದ ಸಂಸ್ಥೆ ಮೇಲೆ ಐಟಿ ದಾಳಿ ಮಾಡಿದ್ದು ಸರಿಯಲ್ಲ; ಕೆಹೆಚ್ ಮುನಿಯಪ್ಪ

ರಾಜ್ಯ13:24 PM October 12, 2019

ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಐಟಿ ದಾಳಿಗೆ ಕೆ.ಹೆಚ್.ಮುನಿಯಪ್ಪ ಜಾತಿ ಲೇಪನ ಮಾಡಿದ್ಧಾರೆ. ದಲಿತ ವ್ಯಕ್ತಿ ಕಟ್ಟಿ ಬೆಳೆಸಿದ ಸಂಸ್ಥೆ ಮೇಲೆ ಐಟಿ ದಾಳಿ ಮಾಡಲಾಗಿದೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಭೇಟಿ ಬಳಿಕ ಮುನಿಯಪ್ಪ ಆರೋಪ ಮಾಡಿದ್ಧಾರೆ. ಸ್ವಾತಂತ್ರ್ಯ ಹೋರಾಟಗಾರ ಗಂಗಾಧರಯ್ಯ ಸೇವಾ ಮನೋಭಾವದಿಂದ ಕಟ್ಟಿದ ಸಂಸ್ಥೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆ. ಪರಮೇಶ್ವರ್ ಓದಿಕೊಂಡು ರಾಜಕೀಯಕ್ಕೆ ಬಂದಿದ್ದಾರೆ. 50 ವರ್ಷದಿಂದ ರಾಜಕೀಯ ಮಾಡುತ್ತಾ ಬಂದಿದ್ದೇವೆ. ಯುಪಿಎ ಸರ್ಕಾರ ಕೂಡ ಆಡಳಿತ ನಡೆಸಿದೆ. ಆದರೆ ಇಂತಹ ಕೆಟ್ಟ ತೀರ್ಮಾನ ಎಂದೂ ಮಾಡಿಲ್ಲ. ಕೈ ಮುಖಂಡರ ಸಂಸ್ಥೆಗೆ ಕೈ ಹಾಕಿದ್ದಾರೆ, ಇದು ಸರಿಯಲ್ಲ. ಪರಮೇಶ್ವರ್​ ಸಹೋದರ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ನೋಡಿಕೊಳ್ತಿದ್ದರು. ಆದರೆ ಪರಮೇಶ್ವರ್ ಲಿಂಕ್ ಮಾಡಿ ದಾಳಿ ಮಾಡಿದ್ದು ಸರಿಯಲ್ಲ. ಜನ ವಿರೋಧಿ ರಾಜಕೀಯ ತೀರ್ಮಾನ ಎಂದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.

sangayya

ಇತ್ತೀಚಿನದು

Top Stories

//