ಹೋಮ್ » ವಿಡಿಯೋ » ರಾಜ್ಯ

ಬಿಜೆಪಿ ಸಮಾವೇಶದಲ್ಲಿ ಮಾಧ್ಯಮದವರ ಮೇಲೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗರಂ

ರಾಜ್ಯ08:40 PM IST Feb 04, 2018

ಬೆಂಗಳೂರು(ಫೆ. 04): ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಮಾಧ್ಯಮದವರ ಮೇಲೆ ಹರಿಹಾಯ್ದ ಘಟನೆ ನಡೆಯಿತು. ಅಡುಗೆಮನೆಯ ಕೆಲಸಕ್ಕೆ ಬಾಲಕರನ್ನು ಬಳಕೆ ಮಾಡಿದ್ದು, ಹಾಗೂ ಗ್ಯಾಸ್ ಒಲೆ ಹಚ್ಚುವಾಗ ಸ್ವಲ್ಪ ಹೊತ್ತು ಬೆಂಕಿ ಭುಗ್ಗೆಂದು ಹೊತ್ತಿ ಉರಿದಿದ್ದು, ಇವೆರಡು ಘಟನೆಗಳನ್ನು ಚಿತ್ರೀಕರಿಸಲು ಹೋದ ಮಾಧ್ಯಮದವರನ್ನು ಕಟ್ಟಾ ನಾಯ್ಡು ಹೊರಕಳುಹಿಸಿದರು. “ಮಾಧ್ಯಮದವರಿಂದ ನಮಗೇನೂ ಆಗಬೇಕಿಲ್ಲ. ನೀವು ಸುಳ್ಳು ಸುದ್ದಿ ಮಾಡ್ತಿದ್ದೀರ. ಹೊರಗೆ ಹೋಗಿ. ಅಡುಗೆ ಮನೆಯಲ್ಲಿ ಯಾವುದೇ ವಿಡಿಯೋ ಮಾಡಬೇಡಿ,” ಎಂದು ಅಡುಗೆ ಮನೆ ಉಸ್ತುವಾರಿ ವಹಿಸಿಕೊಂಡಿದ್ದ ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಾಕೀತು ಮಾಡಿದರು.

webtech_news18

ಇತ್ತೀಚಿನದು Live TV