ಹೋಮ್ » ವಿಡಿಯೋ » ರಾಜ್ಯ

ಕೊಡಗಿನ ಸಂತ್ರಸ್ತರ ನೆರವಿಗೆ ನಿಂತ ಕೇರಳದ ಯುವಕರು

ದೇಶ-ವಿದೇಶ16:38 PM August 19, 2019

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಹಲವಾರು ಜನರ ಜೀವನ ಮೂರಾಬಟ್ಟೆಯಾಗಿದೆ. ಹಲವು ಕಡೆ ಇನ್ನೂ ಕೂಡ ನಿರಾಶ್ರಿತ ಕೇಂದ್ರ ಮನೆ ಮಠಗಳನ್ನು ಕಳೆದುಕೊಂಡು ಜಿಲ್ಲೆಯ ಜನರು ಕಣ್ಣೀರಿನಲ್ಲೇ ದಿನದೂಡುತ್ತಿದ್ದಾರೆ. ಇಂತಹ ಸಂತ್ರಸ್ತರ ಕಣ್ಣೀರೊರೆಸುವಂತಹ ಕಾರ್ಯವನ್ನು ಕೇರಳದ ಯುವಕರು ಮಾಡಿ ಇದೀಗ ಹಲವರ ಮನಗೆದ್ದಿದ್ದಾರೆ. ಕಾಸರಗೋಡು ಜಿಲ್ಲೆಯ ಕಿದ್ಮಾ (KIDMA) ಎಂಬ ಸ್ವಯಂ ಸೇವಕ ಸಂಘಟನೆಯ ಕಾರ್ಯಕರ್ತರು ಕೆಲದಿನಗಳ ಹಿಂದೆ ಕೊಡಗಿನ ನಿರಾಶ್ರಿತರಿಗೆ ಲಾರಿ ಹಾಗೂ ಇತರೆ ವಾಹನಗಳಲ್ಲಿ ಬಟ್ಟೆ-ಆಹಾರಗಳನ್ನು ಪೂರೈಸಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ನೆರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಆತ್ಮ ವಿಶ್ವಾಸ ತುಂಬಿದ್ದಾರೆ. ಇದೀಗ ಈ ಯುವಕರ ತಂಡಕ್ಕೆ ಜಿಲ್ಲೆಯ ಜನರಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

sangayya

ಇತ್ತೀಚಿನದು Live TV

Top Stories

//