ಹೋಮ್ » ವಿಡಿಯೋ » ರಾಜ್ಯ

ತಮಿಳುನಾಡಿನ ಊಟಿಯಲ್ಲಿ ಕರ್ನಾಟಕದ ಸಿರಿ ಉದ್ಯಾನವನ

ದೇಶ-ವಿದೇಶ17:12 PM January 15, 2018

ಕರ್ನಾಟಕದ ಸೌಂದರ್ಯಲೋಕವು ತಮಿಳುನಾಡಿನ ಊಟಿಯಲ್ಲಿ ಸೃಷ್ಟಿಯಾಗಿದೆ. ದೇಶದ ಅತ್ಯಂತ ಜನಪ್ರಿಯ ಪ್ರವಾಸಿತಾಣಗಳಲ್ಲೊಂದಾಗಿರುವ ಊಟಿಯಲ್ಲಿ ‘ಕರ್ನಾಟಕ ಸಿರಿ ಉದ್ಯಾನವನ’ ಅನಾವರಣಗೊಂಡಿದೆ. ಕರ್ನಾಟಕ ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಈ ವಿಶೇಷ ಪಾರ್ಕ್ನ ಉದ್ಘಾಟನೆ ಮಾಡಿದ್ದಾರೆ. 38.91 ಎಕರೆ ಪ್ರದೇಶದಲ್ಲಿ 12 ಕೋಟಿ ರೂ ವೆಚ್ಚದಲ್ಲಿ ಉದ್ಯಾನವನವನ್ನು ನಿರ್ಮಿಸಲಾಗಿದೆ. ಬೆಟ್ಟ ಪ್ರದೇಶದಂತೆ ಕಂಗೊಳಿಸುವ ಹೂವಿನಲೋಕ, ಗಾಜಿನ ಮನೆ, ಇಟಾಲಿಯನ್ ಗಾರ್ಡನ್ ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳು ಈ ಪಾರ್ಕ್ನಲ್ಲಿವೆ. ಬೆಂಗಳೂರಿನ ಲಾಲ್ಬಾಗ್ನಂತೆ ಊಟಿಯಲ್ಲಿಯೂ ಚಳಿಗಾಲದ ಪುಷ್ಪ ಪ್ರದರ್ಶನ ನಡೆಯಲಿದೆ. ಜನಸಾಮಾನ್ಯರು ಕಡಿಮೆ ದರದಲ್ಲಿ ಪ್ರವೇಶ ಚೀಟಿ ಪಡೆದು ಉದ್ಯಾನವನದಲ್ಲಿ ಸುತ್ತಾಡಿ ಆನಂದಿಸಬಹುದು.

webtech_news18

ಇತ್ತೀಚಿನದು Live TV
corona virus btn
corona virus btn
Loading