ನೆರೆ ಪರಿಹಾರ ಬರದ ವಿಚಾರವನ್ನೇ ಪ್ರತಿಪಕ್ಷಗಳು ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಬರ ನಿರ್ವಹಣೆ ಹೇಗೆ ಮಾಡಿದೆ ಲೋಕಕ್ಕೆ ಗೊತ್ತು. ಕುಮಾರಸ್ವಾಮಿ ಅವರು ರೈತರ ಸಾಲಮನ್ನದ ವಿಚಾರದಲ್ಲಿ ಯಾವ ರೀತಿ ನಡೆಕೊಂಡಿದ್ದರು ಎಂಬುದು ಗೊತ್ತಿದೆ. ಅವರ ಅಸಹಾಯಕತೆಯನ್ನು ಎಲ್ಲಾ ಕಡೆ ಹೇಳಿಕೊಳ್ಳುವ ಕೆಲಸ ಮಾಡುತ್ತಿದ್ದರು. ಹಾಗಂತ ಅವರ ಲೋಪದೋಷಗಳು ನಮಗೆ ಆಧಾರವಲ್ಲ. ಜನರ ಕಷ್ಟ ಸುಖದಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ. ಹಿಂದೆಂದೂ ಕೊಡದಂತ ಪರಿಹಾರವನ್ನು ಕೊಡುವ ಕೆಲಸ ಆಗುತ್ತೆ.