ಪಟ್ಟದಕಲ್ಲಿನ ಜನರ ನರಕದಲ್ಲೇ ಬದುಕುವಂತಾಗಿದೆ. ದಾನಿಗಳು ಕೊಡುವ ಒಂದು ತಟ್ಟೆಗೋಸ್ಕರ ಇಲ್ಲಿನ ಜನರು ಸಾಲಿನಲ್ಲಿ ನಿಲ್ಲುವಂತಾಗಿದೆ. ಮನೆಯ ಪಾತ್ರೆಗಳು, ಹಾಸಿಗೆ, ಆಹಾರ ಧಾನ್ಯಗಳು ಎಲ್ಲವೂ ಮಣ್ಣಿನಡಿ ಹೂತುಹೋಗಿದೆ. ಇಲ್ಲಿನ ಬಹುತೇಕರ ತಲೆಯ ಮೇಲೆ ಸೂರಿಲ್ಲ. ಕೊಳಚೆಯಿಂದ ಪ್ರತಿಯೊಂದು ಮನೆಯವರೂ ಜ್ವರದಿಂದ ಬಳಲುತ್ತಿದ್ದಾರೆ. ಸರ್ಕಾರ 500 ಶೆಡ್ಗಳನ್ನಾದರೂ ಮಾಡಿಕೊಡಲಿ ಎಂಬುದು ಜನರ ಬೇಡಿಕೆ. ಈ ಬಗ್ಗೆ ನ್ಯೂಸ್18 ಕನ್ನಡದ ನಿರೂಪಕಿ ಶ್ರೀಲಕ್ಷ್ಮೀ ರಾಜಕುಮಾರ್ ನೀಡಿರುವ ಸಾಕ್ಷಾತ್ ವರದಿ ಇಲ್ಲಿದೆ.