ಹೋಮ್ » ವಿಡಿಯೋ » ರಾಜ್ಯ

ಕಳಂಕ ಆರೋಪ: ತಾಯಿ ಮಾತು ನೆನೆದು ಗದ್ಗದಿತರಾದ ಸ್ಪೀಕರ್

ರಾಜ್ಯ16:20 PM February 11, 2019

ಬೆಂಗಳೂರು: ಮೊನ್ನೆ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ ಆಡಿಯೋ ಸಂಭಾಷಣೆಯಲ್ಲಿ ಬಿಜೆಪಿಯವರು ಸ್ಪೀಕರ್ ಅವರನ್ನು 50 ಕೋಟಿಗೆ ಬುಕ್ ಮಾಡಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಇವತ್ತು ವಿಧಾನಸಭೆಯಲ್ಲಿ ಈ ವಿಚಾರವೇ ಪ್ರಧಾನವಾಗಿ ಚರ್ಚೆಯಾಯಿತು. ಈ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಭಾವುಕರಾಗಿ ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಮಾತನಾಡುತ್ತಾ ರಮೇಶ್ ಕುಮಾರ್ ತಮ್ಮ ತಾಯಿಯ ಮಾತುಗಳನ್ನ ನೆನೆದು ಗದ್ಗದಿತರಾಗಿದ್ದುಂಟು. ಉಳ್ಳವರ ಮನೆಗೆ ಹೋಗಿ ಹೊರಗೆ ಬರುವಾಗ ಪಾದದ ದೂಳನ್ನು ಆ ಮನೆಯ ಅಂಗಳದಲ್ಲೇ ಕೊಡವಿ ಬರಬೇಕು. ಅಲ್ಲಿಂದ ಧೂಳೂ ಕೂಡ ತಮ್ಮ ಕಾಲಿಗೆ ಮೆತ್ತಿಕೊಳ್ಳಬಾರದು ಎಂದು ತಮ್ಮ ತಾಯಿ ಹೇಳಿದ್ದರು. ಅವರು ತಮ್ಮ ಮೊದಲ ರಾಜಕೀಯ ಗುರುವಾಗಿದ್ದರು ಎಂದು ರಮೇಶ್ ಕುಮಾರ್ ಹೇಳುತ್ತಾರೆ.

sangayya

ಇತ್ತೀಚಿನದು

Top Stories

//