Vijayadashami 2019: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ವಾಡಿಕೆಯಂತೆ ಸುತ್ತೂರು ಶಾಖಾ ಮಠಕ್ಕೆ ಸಿಎಂ ಬಿಎಸ್ವೈ ಭೇಟಿ ನೀಡಿದ್ರು.. ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಿಎಸ್ವೈ ಶಾಖಾ ಮಠದಲ್ಲಿರೋ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ್ರು. ಸಿಎಂ ಜೊತೆ ಸಚಿವ ನಾಗೇಶ್, ಸಿ.ಟಿ, ರವಿ, ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ರು. ಮಠದಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಸಿಎಂ ದಸರಾ ಸುಗಮವಾಗಿ ನಡೆಯಲಿ ಅಂತ ಪ್ರಾರ್ಥಿಸಿದ್ರು. ಮಠದಲ್ಲಿ ಸಿಎಂ ಯಡಿಯೂರಪ್ಪ ಉಪಹಾರ ಸೇವಿಸಿದ್ರು.