Vijayadashami 2019: ನವರಾತ್ರಿಯ ವಿಶೇಷ ವಿಶ್ವವಿಖ್ಯಾತ ಜಂಬೂಸವಾರಿಗೆ ಅರಮನೆ ನಗರಿ ಮೈಸೂರು ಸಜ್ಜಾಗಿದೆ. ಶ್ರೀಗಂಧದ ಬೀಡಲ್ಲಿ ನಾಡಹಬ್ಬದ ಸಡಗರ ಮನೆ ಮಾಡಿದ್ದು, ರಾಜಪರಂಪರೆಯ ಸಂಕೇತವಾಗಿ ಸಾಂಸ್ಕೃತಿಕ ನಗರಿಯಲ್ಲಿ 409 ನೇ ದಸರಾ ವಿಜಯದಶಮಿ ನಡೆಯುತ್ತಿದೆ. ಮಧ್ಯಾಹ್ನ 2.15ರಿಂದ 2.58ರೊಳಗಿನ ಮಕರ ಲಗ್ನದಲ್ಲಿ ಸಿಎಂ ಬಿಎಸ್ವೈ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.. 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಶ್ರೀಚಾಮುಂಡೇಶ್ವರಿಯನ್ನು ಹೊತ್ತು ಅರ್ಜುನ ಹೆಜ್ಜೆ ಹಾಕೋದನ್ನ ಕಣ್ತುಂಬಿಕೊಳ್ಳಲು ಇಡೀ ನಾಡೇ ಕಾತುರದಿಂದ ಕಾಯ್ತಿದೆ.. ಅರ್ಜುನನಿಗೆ ಸಾಥ್ ನೀಡಲು ಗಜಪಡೆ ಕೂಡಾ ರೆಡಿಯಾಗಿದೆ. ಗಜಪಡೆಗಳಿಗೆ ಕಲರ್ ಫುಲ್ ಪೇಟಿಂಗ್ ಮಾಡ್ತಿದ್ದಾರೆ.