ಹೋಮ್ » ವಿಡಿಯೋ » ರಾಜ್ಯ

ಇಂಥವರ ಸಂಖ್ಯೆ ಹೆಚ್ಚಾಗಿರುವುದರಿಂದಲೇ ದೇಶಕ್ಕೆ ಆಪತ್ತು: ಗೋಡ್ಸೆ ಬೆಂಬಲಿಗರ ಬಗ್ಗೆ ಖರ್ಗೆ ಖೇದ

ರಾಜ್ಯ20:01 PM May 17, 2019

ಕಲಬುರ್ಗಿ: ಗೋಡ್ಸೆ ವಿಚಾರವಾಗಿ ರಾಜೀವ್ ಗಾಂಧಿಯನ್ನು ನಿಂದಿಸಿ ನಳೀನ್ ಕುಮಾರ್ ಕಟೀಲು ನೀಡಿದ ಹೇಳಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದರು. ದೇಶಕ್ಕಾಗಿ ಪ್ರಾಣ ಬಲಿಕೊಟ್ಟ ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಇವರು ದೇವರೆಂದು ತಿಳಿಯುತ್ತಾರೆ. ಇಂಥ ವಿಚಾರಧಾರೆಯವರ ಸಂಖ್ಯೆ ಹೆಚ್ಚಾಗಿರುವುದರಿಂದಲೇ ದೇಶಕ್ಕೆ ಇವತ್ತು ಆಪತ್ತು ಬಂದಿದೆ ಎಂದು ಖರ್ಗೆ ವ್ಯಗ್ರರಾದರು. ಹಾಗೆಯೇ, ನರೇಂದ್ರ ಮೋದಿ ರಾಷ್ಟ್ರಪಿತರ ಸಮಾಧಿಗೆ ಹೋಗಿ ತಲೆಬಾಗಿಸುತ್ತಾನೆ, ಇನ್ನೊಂದು ಕಡೆ ಈ ರೀತಿಯಾಗಿ ಇವರು ಮಾತನಾಡುತ್ತಾರೆ. ನಿಮ್ಮ ಮನಸ್ಸಲ್ಲಿರೋದೇ ಬೇರೆ, ಹೊರಗೆ ತೋರಿಸಕೊಳ್ಳೋದೇ ಬೇರೆ ಎಂಬುದು ಗೊತ್ತಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

sangayya

ಇತ್ತೀಚಿನದು

Top Stories

//