ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪ ಮತ್ತು ನಾನು ಒಂದಲ್ಲ ಒಂದು ದಿವಸ ಸೇರುತ್ತೇವೆ: ಸಿಎಂ ಇಬ್ರಾಹಿಂ

ರಾಜ್ಯ19:25 PM January 16, 2020

ಚಿಕ್ಕಮಗಳೂರು(ಜ. 16): ಮೊನಚು ಮಾತುಗಳಿಗೆ ಹೆಸರಾಗಿರುವ ಕಾಂಗ್ರೆಸ್ ಮುಖಂಡ ಮತ್ತು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಯಡಿಯೂರಪ್ಪ ಪರವಾಗಿ ಹೇಳಿಕೆಗಳನ್ನು ನೀಡಿ ಅಚ್ಚರಿ ಮೂಡಿಸಿದ್ಧಾರೆ. ಅಜ್ಜಂಪುರದ ಸೊಲ್ಲಾಪುರದಲ್ಲಿ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು, ತಾನು ಮತ್ತು ಯಡಿಯೂರಪ್ಪ ಯಾವತ್ತಾದರೂ ಒಮ್ಮೆ ಸೇರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ಈ ಮೂಲಕ ಅವರು ಬಿಜೆಪಿ ಸೇರುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿರಬಹುದಾ ಎಂಬ ಅನುಮಾನ ಸುಳಿದಿದೆ. “… ಯಡಿಯೂರಪ್ಪ ನನಗೆ ಆತ್ಮೀಯ ಸ್ನೇಹಿತರು. ರೈಲು ಒಂದೇ, ರೈಲ್ವೆ ಸ್ಟೇಷನ್ ಮಾತ್ರ ಬೇರೆ ಅಷ್ಟೇ. ನಾವು ಅದ್ಯಾವಾಗ ಸೇರುತ್ತೇವೋ(ರಾಜಕೀಯವಾಗಿ) ಗೊತ್ತಿಲ್ಲ ನಂಗೆ. ಒಂದಲ್ಲ ಒಂದು ದಿನಸ ನಾವು ಸೇರುತ್ತೇವೆ ಅನ್ನೋ ವಿಶ್ವಾಸ ಇದೆ” ಎಂದು ತಿಳಿಸಿದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading