ಐಎಂಎನಲ್ಲಿ ಹೂಡಿಕೆ ಮಾಡಿದ್ದ ಲಕ್ಷಾಂತರ ಜನರು ಮೋಸ ಹೋಗಿದ್ದಾರೆ. ಡಯಾಬಿಟಿಟ್ ಹೆಚ್ಚಾಗಿ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ವ್ಯಕ್ತಿಗೂ ಮೋಸ ಆಗಿದೆ. ಬಾಬಾ ಜಾನ್ ಎಂಬ ವ್ಯಕ್ತಿ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಹಣ ಹೊಂದಿಸಿ ಐಎಂಎನಲ್ಲಿ ಕೂಡಿಟ್ಟಿದ್ದರು. ಅವರಿವರ ಬಳಿ ಭಿಕ್ಷೆ ಬೇಡಿ, ಸಾಲ ಪಡೆದ ಹಣವನ್ನು ತಂದು ಐಎಂಎಗೆ ಕಟ್ಟಿದ್ದರು. ಈಗ ಬಾಬಾ ಜಾನ್ ಹಣ ಕಳೆದುಕೊಂಡು ಅಕ್ಷರಶಃ ಕುರುಡಾಗಿದ್ದಾರೆ.