ಮಗಳ ಮದುವೆಗೆ ಎಂದು ಹಣ ಹೂಡಿಕೆ ಮಾಡಿದ್ದೆ. ತಿಂಗಳು ಬಾಕಿ ಇರುವಾಗ ಬನ್ನಿ ದುಡ್ಡು ಸಿಗುತ್ತೆ ಎಂದಿದ್ದರು. ಈಗ ಮಗಳ ಮದುವೆಗೆ ಒಂದು ತಿಂಗಳು ಬಾಕಿ ಇದೆ. ಕೈಯಲ್ಲಿ ದುಡ್ಡಿಲ್ಲದೇ ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ನಮಗೆ ಮೋಸ ಮಾಡಿದವನು ಉದ್ಧಾರವಾಗುವುದಿಲ್ಲ ಎಂದು ಐಎಂಎ ಮಾಲೀಕರ ವಿರುದ್ಧ ಶಾಪ ಹಾಕಿದ ದಾವಣಗೆರೆ ಮಹಿಳೆ.