ಹೋಮ್ » ವಿಡಿಯೋ » ರಾಜ್ಯ

ಬಳ್ಳಾರಿ ಜಿಲ್ಲೆಯ ಜನರಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ; ಆನಂದ್​ ಸಿಂಗ್​

ರಾಜ್ಯ15:47 PM July 02, 2019

ನಾನು ಕಾಂಗ್ರೆಸ್​ ಪಕ್ಷ ಬಿಡುವುದಿಲ್ಲ. ರಾಜೀನಾಮೆಗೂ ಆಪರೇಷನ್​ ಕಮಲಕ್ಕೂ ಸಂಬಂಧವಿಲ್ಲ. ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಕೊಡಲು ನನ್ನ ವಿರೋಧ ಇದೆ. ವಿಜಯನಗರ ಜಿಲ್ಲೆಗೆ ನಮ್ಮ ಆಗ್ರಹ. ಈ 2 ಕಾರಣಗಳಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ಬಳ್ಳಾರಿ ಜನರಿಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದೇನೆ ಎಂದು ನ್ಯೂಸ್​18ಗೆ ಕೈ ಶಾಸಕ ಆನಂದ್​ ಸಿಂಗ್​ ಪ್ರತಿಕ್ರಿಯೆ ನೀಡಿದ್ದಾರೆ. ಸಮಸ್ಯೆ ಬಗೆಹರಿದರೆ ರಾಜೀನಾಮೆ ವಾಪಸ್​ ಪಡೆಯುತ್ತೇನೆ. ಇಷ್ಟು ಬೇಗ ಸಮಸ್ಯೆ ಬಗೆಹರಿಯುತ್ತೆ ಅಂದುಕೊಂಡಿಲ್ಲ ಎಂದರು. ನನಗೆ ಸಿದ್ದರಾಮಯ್ಯ ಆಗಲಿ, ಕುಮಾರಸ್ವಾಮಿಯಾಗಲಿ ಮಾತನಾಡಿಲ್ಲ. ಅವರು ಮಾತನಾಡುವ ಮಟ್ಟಕ್ಕೆ ಸಮಸ್ಯೆ ಹೋಗಿಲ್ಲ. ಸಚಿವ ಡಿ ಕೆ ಶಿವಕುಮಾರ್ ನನ್ನ ಮುಖಂಡರು, ಪಕ್ಷಾತೀತವಾಗಿ ಅವರನ್ನು ನಾನು ಗೌರವಿಸುತ್ತೇನೆ.

sangayya

ಇತ್ತೀಚಿನದು

Top Stories

//