News18 India World Cup 2019
ಹೋಮ್ » ವಿಡಿಯೋ » ರಾಜ್ಯ

10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ; ಕುಸುಮಾ ಶಿವಳ್ಳಿ

ರಾಜ್ಯ11:10 AM IST May 19, 2019

ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಗೆ ಮತದಾನ ನಡೆಯುತ್ತಿದೆ. ಮತದಾನಕ್ಕೂ ಮೊದಲು ಗುಡೇನಕಟ್ಟಿ ಗ್ರಾಮದಲ್ಲಿ ಕುಸುಮಾ ಶಿವಳ್ಳಿ ಹಾಗೂ ಕೈ ಕಾರ್ಯಕರ್ತರು ದಿವಂಗತ ಸಿ.ಎಸ್​. ಶಿವಳ್ಳಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು. ಮತದಾನ ಮಾಡಿದ ಬಳಿಕ ಯರಗುಪ್ಪಿಯಲ್ಲಿ ಕೈ ಅಭ್ಯರ್ಥಿ ಕುಸುಮಾ ಶಿವಳ್ಳಿ ಮಾತನಾಡಿ, ಮಗಳು ಇದೇ‌ ಮೊದಲು ಬಾರಿ ಮತದಾನ ಮಾಡಿದ್ದಾಳೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. 10 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು. ದಿವಂಗತ ಸಿ.ಎಸ್. ಶಿವಳ್ಳಿ ಮಗಳು ದೀಪಾ ಶಿವಳ್ಳಿ ಮಾತನಾಡಿ, ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ಮತ ಹಾಕಬೇಕು, ನಮ್ಮ ಹಕ್ಕು ಎಂದು ಅಪ್ಪ ಹೇಳುತ್ತಿದ್ದರು. ಅಮ್ಮನಿಗೆ ಮೊದಲ ಮತ ಹಾಕಿದ್ದು ಖುಷಿಯಾಗಿದೆ. ಅಮ್ಮ ಗೆಲ್ಲುವ ಭರವಸೆ ಇದೆ ಎಂದರು.

sangayya

ಇತ್ತೀಚಿನದು Live TV