ಹೋಮ್ » ವಿಡಿಯೋ » ರಾಜ್ಯ

ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಸರ್ಕಾರ ಬರುವ ನಿರೀಕ್ಷೆ ಇದೆ; ಆರ್​.ಅಶೋಕ್​ ವಿಶ್ವಾಸ

ರಾಜ್ಯ12:36 PM July 01, 2019

ಈ ವರ್ಷದ ನನ್ನ ಹುಟ್ಟುಹಬ್ಬದಲ್ಲಿ ಹೊಸ ಸರ್ಕಾರ ಬರುವ ನಿರೀಕ್ಷೆಯಲ್ಲಿದ್ದೇನೆ. ಕಾಯಿಲೆ ಬಂದಾಗ ಆಪರೇಷನ್‌ ಮಾಡಲೇಬೇಕು. ಕಾಂಗ್ರೆಸ್‌ಗೆ ಕಾಯಿಲೆ ಬಂದಿದೆ. ಅದಕ್ಕೆ ಈ ಥರದ ಆಪರೇಷನ್ ಆಗಿದೆ. ಇದೊಂದು ಅಪವಿತ್ರ ಮೈತ್ರಿ. ದಿನ ನಿತ್ಯ ಹೊಡೆದಾಟ, ಗಲಾಟೆ ಇದರಿಂದ ಬೇಸತ್ತು ಆನಂದ್ ಸಿಂಗ್ ರಾಜೀನಾಮೆ ನೀಡಿರಬಹುದು. ಜಿಂದಾಲ್ ವಿಚಾರದಲ್ಲಿ ಆನಂದ್‌ಸಿಂಗ್‌ರನ್ನು ಕೇಳಬೇಕಿತ್ತು. ಮಧ್ಯಂತರ ಚುನಾವಣೆ ಬರಲ್ಲ. ಬಿಜೆಪಿಯವರು ಸನ್ಯಾಸಿಗಳಲ್ಲ ಹೊಸ ಸರ್ಕಾರ ರಚನೆ ಮಾಡೋಕೆ ಸಿದ್ದತೆ ಮಾಡಿಕೊಳ್ಳಲಿದ್ದಾರೆ. ಈ ಬೆಳವಣಿಗೆಯ ಪರಿಣಾಮ ನೋಡಿಕೊಂಡು ಬಿಜೆಪಿ ತನ್ನ ರಣತಂತ್ರ ರೂಪಿಸಲಿದೆ ಎಂದು ಮೈಸೂರಿನಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories