ಬೆಂಗಳೂರು: ನನಗೆ ಪೊಲೀಸರ ಬಗ್ಗೆ ಗೌರವ ಇದೆ. ಅನೇಕ ದಶಕಗಳಿಂದ ಪೊಲೀಸರ ಪರವಾಗಿ ಹೋರಾಡಿದವನು ನಾನು. ಚೆಡ್ಡಿ ಹಾಕುತ್ತಿದ್ದ ಪೊಲೀಸರಿಗೆ ಪ್ಯಾಂಟು ಕೊಡಿಸಿದೋನು ನಾನು. ಆದರೆ, ಪ್ರತಿಭಟನೆಗೆ ಹೊರಟಿದ್ದ ನನ್ನನ್ನು ನನ್ನ ಮನೆಯಿಂದಲೇ ಬಂಧಿಸಿರುವುದು ನನಗೆ ಬೇಸರ ತಂದಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ಧಾರೆ. ಪೌರತ್ವ ಕಾಯ್ದೆ ವಿರೋಧಿಸಿ ಇಂದು ನಗರಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಗೆ ವಾಟಾಳ್ ನಾಗರಾಜ್ ಬೆಂಬಲ ಸೂಚಿಸಿದ್ದಾರೆ.