ಹೋಮ್ » ವಿಡಿಯೋ » ರಾಜ್ಯ

ಸಿಎಲ್​ಪಿ ಸಭೆಗೆ ಗೈರಾಗಿದ್ದು ಉದ್ದೇಶಪೂರ್ವಕವಲ್ಲ: ಜಿ ಪರಮೇಶ್ವರ್ ಸ್ಪಷ್ಟನೆ

ರಾಜ್ಯ15:47 PM September 18, 2019

ದೆಹಲಿ: ಬೆಂಗಳೂರಿನಲ್ಲಿ ನಡೆದ ಸಿಎಲ್ಪಿ ಸಭೆಯಲ್ಲಿ ಗೈರಾಗಿದ್ದ ಜಿ. ಪರಮೇಶ್ವರ್ ಅವರು ಇದೇ ವೇಳೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪರಮೇಶ್ವರ್, ತನಗೆ ಸೋನಿಯಾ ಅವರ ಜೊತೆ ಪೂರ್ವನಿಯೋಜಿತ ಭೇಟಿ ಇದ್ದದ್ದರಿಂದ ಸಿಎಲ್ಪಿ ಸಭೆಗೆ ಹೋಗಲಾಗಲಿಲ್ಲ. ಸಭೆ ಇದ್ದದ್ದು ಗೊತ್ತಾಗಿದ್ದೇ ನಿನ್ನೆ. ಅಷ್ಟರಲ್ಲಿ ದೆಹಲಿಗೆ ಬಂದಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ, ದೆಹಲಿಯಲ್ಲಿ ಯಾವುದೇ ರಹಸ್ಯ ಸಭೆಯಲ್ಲಿ ತಾನು ಭಾಗಿಯಾಗಿಲ್ಲ. ಸೋನಿಯಾ ಗಾಂಧಿ ಜೊತೆ ಸ್ವಾಭಾವಿಕ ಭೇಟಿ ಅದಾಗಿತ್ತಷ್ಟೇ ಎಂದೂ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading