ಹಾಸನ: ದೇಶದಲ್ಲಿ ನಡೆಯುತ್ತಿರುವ ಐಟಿ ರೇಡ್ ಬಗ್ಗೆ ವ್ಯಂಗ್ಯವಾಡಿದ ಅವರು ತಮ್ಮ ಮನೆಯ ಮೇಲೂ ದಾಳಿ ನಡೆಯಲಿ ಎಂದು ಸ್ವಾಗತಿಸಿದರು. ದೇಶದಲ್ಲಿ ಎಮರ್ಜೆನ್ಸಿ ಈಗಾಗಲೇ ಪ್ರಾರಂಭವಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ನನ್ನ ಮನೆಗೆ ಬರಲಿ ಎಂದು ಕಾಯುತ್ತಿದ್ದೇನೆ. ನನ್ನ ಮನೆಯಲ್ಲಿ ಯಡಿಯೂರಪ್ಪಗೆ ಸಂಬಂಧಿಸಿದ ದಾಖಲೆಗಳಿವೆ. ಅವುಗಳನ್ನ ಐಟಿ ಅಧಿಕಾರಿಗಳಿಗೆ ತೋರಿಸುತ್ತೇನೆ. ನಾನು ಸಿಎಂ ಆಗಿ ಲೂಟಿ ಹೊಡೆಯೋ ಕೆಲಸ ಮಾಡದೇ ಇರೋದರಿಂದಲೇ ಧೈರ್ಯವಾಗಿದ್ದೀನಿ. ನಾನೇನು ಹೆದರಿ ಕೂರೋದಿಲ್ಲ. ಯಾರಾದರೂ ಧ್ವನಿ ಎತ್ತಲೇಬೇಕಿದೆ ಎಂದವರು ಹೇಳಿದರು.