ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯರಂತಹ ಅದೆಷ್ಟೋ ಗಿಳಿಗಳನ್ನು ಬೆಳೆಸಿದವರೇ ನಮ್ಮಪ್ಪ; ಹೆಚ್​.ಡಿ. ಕುಮಾರಸ್ವಾಮಿ ತಿರುಗೇಟು

ರಾಜ್ಯ15:12 PM September 24, 2019

ರಾಮನಗರ (ಸೆ. 24): ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಹೆಚ್​.ಡಿ. ಕುಮಾರಸ್ವಾಮಿ- ಸಿದ್ದರಾಮಯ್ಯ ಈಗ ಮತ್ತೆ ಸಾರ್ವಜನಿಕವಾಗಿ ಒಬ್ಬರ ಮೇಲೊಬ್ಬರು ಕಿಡಿಕಾರಲಾರಂಭಿಸಿದ್ದಾರೆ. ಇಂದು ಬೆಳಗ್ಗೆ ಹೆಚ್​ಡಿಕೆ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ನಾನು ನಂಬಿದ ಗಿಳಿಗಳು ಹದ್ದಾಗಿ ಕಾಡಲಾರಂಭಿಸಿವೆ. ಹದ್ದನ್ನು ಗಿಳಿಯೆಂದು ನಂಬಿ ಮೈತ್ರಿ ಮಾಡಿಕೊಂಡೆವು. ಅದು ಕುಕ್ಕದೇ ಬಿಡುತ್ತದೆಯೇ? ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಹೆಚ್​.ಡಿ. ಕುಮಾರಸ್ವಾಮಿ, ನಾನು ಸಿದ್ದರಾಮಯ್ಯ ಸಾಕಿರುವ ಗಿಳಿಯಲ್ಲ. ನಮ್ಮಪ್ಪ ದೇವೇಗೌಡರೇ ಸಿದ್ದರಾಮಯ್ಯನವರಂತಹ ಅನೇಕ ಗಿಳಿಗಳನ್ನು ಬೆಳೆಸಿದ್ದಾರೆ. ಅವುಗಳು ನಮ್ಮನ್ನು ಹೇಗೆ ಕುಕ್ಕಿದ್ದಾವೆಂದು ನನಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

sangayya

ಇತ್ತೀಚಿನದು Live TV

Top Stories