ಹೋಮ್ » ವಿಡಿಯೋ » ರಾಜ್ಯ

ಹುಳಿಮಾವು ಕೆರೆ ಒಡೆದು ಜಲಾವೃತಗೊಂಡ ಬೆಂಗಳೂರಿನ ಮನೆಗಳು

ರಾಜ್ಯ11:01 AM November 25, 2019

ಬೆಂಗಳೂರು (ನ.25): ನಗರದ ಹುಳಿಮಾವು ಕೆರೆ ಕೋಡಿ ಒಡೆದು ಮನೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿರುವ ಘಟನೆ ನಡೆದಿದೆ. ಕೆರೆ ಪಕ್ಕದ ತಗ್ಗು ಪ್ರದೇಶಗಳಿಗೆ ಅಧಿಕ ನೀರು ನುಗ್ಗಿದೆ. ಕೆರೆ ನೀರು ನುಗ್ಗಿದ್ದರಿಂದ ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿವೆ. ಬಿಡಿಎಯಿಂದ ಕೆರೆ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಕೆರೆಯನ್ನು ಸ್ವಚ್ಛಗೊಳಿಸುವ ವೇಳೆ ಕೋಡಿ ಒಡೆದಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

webtech_news18

ಇತ್ತೀಚಿನದು Live TV
corona virus btn
corona virus btn
Loading