ಹೋಮ್ » ವಿಡಿಯೋ » ರಾಜ್ಯ

ಮತದಾನ ಮಾಡದೇ ಬಂದವರಿಗೆ ವ್ಯಂಗ್ಯ ಭರಿತ ಸನ್ಮಾನ

ರಾಜ್ಯ07:45 PM IST Apr 18, 2019

ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದಿಂದ ವಿನೂತನ ಸನ್ಮಾನ.ಇಂದು ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತದಾನದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರನ್ನು ನಗರದ ಹೊರವಲಯದ ಮಾಗಡಿ ಹ್ಯಾಂಡ್ ಪೋಸ್ಟ್ ಮತ್ತು ಕೈಮರದಲ್ಲಿ ತಡೆದು ತಪಾಸಣೆ ಮಾಡಲಾಯಿತು.. ಈ ವೇಳೆ ಮತದಾನ ಮಾಡದೇ ಬಂದವರಲ್ಲಿ ವಿದ್ಯಾವಂತರು ಹಾಗೂ ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರೇ ಹೆಚ್ಚಾಗಿ ಕಂಡು ಬಂದರು.. ಸುಮಾರು ೩೦೦ಕ್ಕೂ ಹೆಚ್ಚು ವಾಹನಗಳಲ್ಲಿ ೮೦೦ ರಿಂದ ಸಾವಿರ ಪ್ರವಾಸಿಗರನ್ನ ತಪಾಸಣೆ ನಡೆಸಲಾಯಿತು.. ಈ ವೇಳೆ ಸರ್ಕಾರದ ಸೌಲಭ್ಯಗಳಾದ ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದರೂ ಸಹಾ ಮತದಾನ ಮಾಡದೆ ಮೋಜು , ಮಸ್ತಿಗಾಗಿ ಬಂದವರೇ ಹೆಚ್ಚಾಗಿದ್ದರು.. ಸೌಲಭ್ಯಗಳಿಗೆ ಮಾತ್ರ ಸರ್ಕಾರ ಬೇಕು ಅನ್ನೋ ಪ್ರವಾಸಿಗರಿಗೆ ಈ ಎಲ್ಲಾ ರೀತೀಯ ಕಾರ್ಡ್ ಗಳನ್ನು ಜೆರಾಕ್ಸ್ ನ ಒಂದೊಂದು ಹಾರವನ್ನು ಹಾಕಿ ಶಾಲು ಹೊದಿಸೋ ಮೂಲಕ ಅವರಿಗೆ ಮತದಾನದ ಅರಿವು ಮತ್ತು ಮಹತ್ವವನ್ನು ತಿಳಿಸಲಾಯಿತು... ತಪಾಸಣೆ ಸಮಯದಲ್ಲಿ ನಮ್ಮ ತಂಡಕ್ಕೆ ಬೇಸರ ತಂದ ಸಂಗತಿಯೆಂದರೆ ಎಷ್ಟೋ ಜನಕ್ಕೆ ಇವತ್ತು ಚುನಾವಣೆ ನಾವು ಮತದಾನ ಮಾಡಬೇಕು ಅನ್ನೋದೆ ಗೊತ್ತಿಲ್ಲದ ಸಂಗತಿ... ಇಂತವರಿಂದ ಪ್ರಜಾಪ್ರಭುತ್ವದ ಉಳಿವು ಹೇಗಾದೀತು ಅನ್ನೋದು ವಿಷಾದಕರ... ಇಂತವರಿಗೆ ಮುಂದಿನ ದಿನಗಳಲ್ಲಿ ತಪ್ಪದೇ ಮತದನಾ ಮಡುವಂತೆ ತಿಳಿಸಲಾಯಿತು.. ಈ ಸಮಯದಲ್ಲಿ ಜಿಲ್ಲಾಧ್ಯಕ್ಷರಾದ ಜಿ.ಎಂ ರಾಜಶೇಖರ, ಪ್ರಧಾನ ಕಾರ್ಯದರ್ಶಿ ಬ್ಯಾಲದಾಳು ಕುಮಾರ್, ಆಲ್ದೂರು ರಾಜೇಶ್ ಸೇರಿದಂತೆ ಸಂಘದ ವಿವಿದ ಪದಾದಿಕಾರಿಗಳು ಸಾಥ್ ನೀಡಿದರು

Shyam.Bapat

ಇತ್ತೀಚಿನದು Live TV