ಬಾಗಲಕೋಟೆಯಲ್ಲಿ ಪ್ರವಾಹದ ಅಬ್ಬರ ಕೊಂಚ ಕಡಿಮೆಯಾಗಿದ್ದು, ಮಲಪ್ರಭಾ ನದಿಯ ಪ್ರವಾಹದಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ರಸ್ತೆ ಪಕ್ಕದಲ್ಲೇ ಟೆಂಟ್ ಹಾಕಿಕೊಂಡು ಬದಾಮಿ ತಾಲೂಕಿನ ಬೀರನೂರು ಗ್ರಾಮದ ಜನರು ವಾಸವಾಗಿದ್ದಾರೆ. ಸರಿಯಾದ ಸೂರಿಲ್ಲದೆ, ಮಳೆ, ಗಾಳಿಯ ನಡುವೆ ವೃದ್ಧರು, ಮಕ್ಕಳು ಸೇರಿದಂತೆ ಇಲ್ಲಿನ ಜನರು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನ್ಯೂಸ್18 ಕನ್ನಡದ ವರದಿಗಾರ ರಾಚಪ್ಪ ಬನ್ನಿದಿನ್ನಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.