ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಅಧಿಕಾರಕ್ಕಾಗಿ ಏನ್​ ಬೇಕಾದ್ರು ಮಾಡ್ತಾರೆ, ಬಿಜೆಪಿ ಜೊತೆ ಸೇರಿದರೂ ಆಶ್ಚರ್ಯವಿಲ್ಲ- ಹೆಚ್​ಡಿಕೆ

ರಾಜ್ಯ02:24 PM IST Feb 02, 2018

ವಿಜಯಪುರ(ಫೆ.02): ಮುಂಬರಲಿರುವ ಚುನಾವಣೆಗೆ ಕರ್ನಾಟಕ ಸಜ್ಜಾಗುತ್ತಿದೆ. ಅತ್ತ ರಾಜಕೀಯ ಪಕ್ಷಗಳೂ ಭರ್ಜರಿ ಪ್ರಚಾರವನ್ನೂ ನಡೆಸುತ್ತಿವೆ. ಒಂದೆಡೆ ಜನರ ಮತಕ್ಕಾಗಿ ನಾನಾ ಕಸರತ್ತು ನಡೆಸುತ್ತಿರುವ ರಾಜಕೀಯ ಮುಖಂಡರು, ಮತ್ತೊಂದೆಡೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವಲಲ್ಲೂ ಹಿಂದೆ ಬಿದ್ದಿಲ್ಲ. ಈ ಮೂಲಕ ರಾಜಕೀಯ ಕೆಸರೆರಚಾಟದಲ್ಲಿ ಪಕ್ಷದ ನಾಯಕರು ಜನರನ್ನು ತಮ್ಮ ಪಕ್ಷದತ್ತ ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಜೆಡಿಎಸ್​ ರಾಜ್ಯಾಧ್ಯಕ್ಷ, ಮಅಜಿ ಮುಖ್ಯಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರುತ್ತಾ ಸಿಎಂ ಬಿಜೆಪಿ ಸೇರುತ್ತಾರೆ ಎಂದಿದ್ದಾರೆ. ವಿಜಯಪುರದ ಆಲಮಟ್ಟಿಯಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿರುವ ಹೆಚ್​. ಡಿ. ಕುಮಾರಸ್ವಾಮಿ "2018ರ ಚುನಾವಣೆ ಬಳಿಕ ಸಿದ್ದರಾಮಯ್ಯನವರೇ 40, 50 ಸೀಟ್ ಗೆದ್ದು ಸರ್ಕಾರ ರಚಿಸಲು ಬಿಜೆಪಿ ಸೇರಿದ್ರೆ ಆಶ್ಚರ್ಯ ಪಡಬೇಕಾಗಿಲ್ಲ. ನಾನು ಹುಡುಗಾಟಿಕೆ ಹೇಳುತ್ತಿಲ್ಲ, ನನಗೆ ಈ ಕುರಿತಾಗಿ ಯಾವುದೇ ಸಂಶಯ ಕೂಡಾ ಇಲ್ಲ. ಸಿದ್ದರಾಮಯ್ಯನವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಅವರಿಗೆ ಅಧಿಕಾರ ಬೇಕಷ್ಟೇ, ಅಧಿಕಾರಕ್ಕಾಗಿ ಏನ್ ಮಾಡೋಕು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹೇಳಿದವರಿಗೆ ಟಿಕೆಟ್ ಕೊಡುತ್ತಾರೆ, ಅದು ಬಿಟ್ಟು ಅವರಿಗೆ ಬೇರೆ ದಾರಿ ಇಲ್ಲ. ಇದಕ್ಕಾಗೇ ಅವರ ಅಭಿಮಾನಿಗಳಿಗೆ ಜಾಸ್ತಿ ಟಿಕೆಟ್ ಕೊಡಿಸಿಕೊಳ್ಳುತ್ತಿದ್ದಾರೆ. ಅತಂತ್ರವಾದರೆ ನಮ್ಮನ್ನು ಬಿಟ್ಟು ಮೊದಲು ಬಿಜೆಪಿಯನ್ನು ಹಿಡಿದುಕೊಳ್ಳುತ್ತಾರೆ. ಅವರ ನಡುವಳಿಕೆಯಲ್ಲಿ ನನಗೆ ಇದೇ ಕಂಡು ಬರುತ್ತದೆ. ಹೀಗಾಗಿ 40,50 ಸೀಟ್​ ಬಂದು ಬಿಜೆಪಿ ಜೊತೆ ಸರ್ಕಾರ ರಚಿಸಿದ್ರೆ ಆಶ್ಚರ್ಯ ಪಡಬೇಡಿ. ಅಲ್ಪಸಂಖ್ಯಾತರು ಕಾಂಗ್ರೆಸ್​ಗೆ ಓಟ್​ ಮಾಡುವ ಮೊದಲು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು" ಎಂದಿದ್ದಾರೆ.

webtech_news18

ಇತ್ತೀಚಿನದು Live TV