ಹೋಮ್ » ವಿಡಿಯೋ » ರಾಜ್ಯ

ಪಶುಪತಿನಾಥನ ದರ್ಶನಕ್ಕೆ ಹೊರಟ ದೇವೇಗೌಡರು

ರಾಜ್ಯ01:47 PM IST Sep 06, 2018

ಮಹಾನ್​ ದೈವಭಕ್ತರಾಗಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ನೇಪಾಳದ ಕಠ್ಮಂಡುಗೆ ತೆರಳಿ ಪಶುಪತಿನಾಥನ ದರ್ಶನ ಪಡೆಯಲು ಸಿದ್ದರಾಗಿದ್ದಾರೆ. ದೆಹಲಿಯ ಜ್ಯೋತಿಷಿಯೊಬ್ಬರು ಪಶುಪತಿನಾಥನ ದರ್ಶನ ಪಡೆಯುವಂತೆ ಸಲಹೆ ನೀಡಿದ್ದರಿಂದ ದೇವೇಗೌಡರು ನೇಪಾಳಕ್ಕೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಸಂಜೆ ನವದೆಹಲಿಯಿಂದ ಕಠ್ಮಂಡುವಿಗೆ ಹೊರಡಲಿರುವ ಅವರು, ಶುಕ್ರವಾರ ಪಶುಪತಿನಾಥನ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.ಆಗಾಗ್ಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಅವರು, ಇದೀಗ ಗಡಿಯಾಚೆ ಇರುವ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ.

webtech_news18

ಇತ್ತೀಚಿನದು Live TV