ಬಂದ್, ಪ್ರತಿಭಟನೆ ಏನೇ ಇರಲಿ ಹೋರಾಟಗಾರರ ಕಣ್ಣಿಗೆ ಮೊದ್ಲು ಬೀಳೋದು ಸರ್ಕಾರಿ ಆಸ್ತಿ ಪಾಸ್ತಿ. ಅದರಲ್ಲೂ ಸರ್ಕಾರಿ ಬಸ್ಸುಗಳು. ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನವನ್ನು ವಿರೋಧಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಕೆಎಸ್ಆರ್ಟಿಸಿ ಬಸ್ ಒಂದಕ್ಕೆ ಬೆಂಕಿ ಹಚ್ಚಿಬಿಟ್ಟರು. ಸಂಪೂರ್ಣವಾಗಿ ಸುಟ್ಟು ಕರಕಲಾದ ಆ ಬಸ್ಸನ್ನು ಈಗ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇರಿಸಲಾಗಿದೆ. ಯಾವುದೇ ಸಿಟ್ಟು, ರೋಷ, ಹೋರಾಟ, ಆಕ್ರೋಶ, ಇರ್ಲಿ ಅದನ್ನು ಸಾರ್ವಜನಿಕ ಸ್ವತ್ತಾದ ಬಸ್ಸಿನ ಮೇಲೆ ತೀರಿಸೋದು ಸರಿಯಲ್ಲ ಅನ್ನೋದನ್ನು ಜನರಿಗೆ ತಿಳಿಸೋಕೆ ಈ ಬಸ್ ಇಲ್ಲಿದೆ.