ಹೋಮ್ » ವಿಡಿಯೋ » ರಾಜ್ಯ

ಗವರ್ನಮೆಂಟ್​​ನೋರು 10 ಸಾವ್ರ ಕೊಟ್ಟಾರ ದವಾಖಾನಿಗ್ ಹಾಕಿ ಬಂದೀನಿ, ಈಗ ತಿನ್ನೂಕ್ ರೊಕ್ಕ ಇಲ್ಲ

ರಾಜ್ಯ11:13 AM October 11, 2019

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮಾಂಜರಿ ಗ್ರಾಮದಲ್ಲಿ ಸಂತ್ರಸ್ತರ ಆಕ್ರೋಶ ಕಟ್ಟೆಯೊಡೆದಿದ್ದು, ಕೇವಲ 10 ಸಾವಿರ ಪರಿಹಾರ ನೀಡಿ ಸರ್ಕಾರ ಕೈ ತೊಳೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ. 50 ಸಾವಿರನು ಇಲ್ಲಾ 5 ಲಕ್ಷನು ಬಂದಿಲ್ಲಾ ಎನ್ನುವ ಇವರು, ನೇರೆ ಸಂತ್ರಸ್ತರ ಸರ್ಕಾರ ಕೈಬಿಟ್ಟಿದೆ ಎನ್ನುತ್ತ ಕಣ್ಣಿರಿಡುತ್ತಿದ್ದಾರೆ. ಜೊತೆಗೆ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ ನೆರೆ ಸಂತ್ರಸ್ತರು. ಬಾಡಿಗೆ ಮನೆ ಮಾಡಿಕೊಂಡ್ರೆ 5 ಸಾವಿರ ಬಾಡಿಗೆ ಕೊಡುವ ಭರವಸೆ ಕೊಟ್ಟಿದ್ರು, ಆದ್ರೆ ಭರವಸೆ ಹಾಗೇ ಉಳಿದುಕೊಂಡಿದೆ. ಮನೆಗಳಿಲ್ಲದೆ ಸಮುದಾಯ ಭವನದಲ್ಲಿ ವಾಸ ಮಾಡುತ್ತಿರುವ ಸಂತ್ರಸ್ತರು, ಎರಡು ತಿಂಗಳು ಕಳೆದರು ಇನ್ನು ಪರಿಹಾರ ಬಂದಿಲ್ಲ. ಸರ್ವೆ ಕಾರ್ಯ ಮುಗಿದಿದೆ ಆದ್ರೆ ಪರಿಹಾರ ಮಾತ್ರ ಇನ್ನು ಬಂದಿಲ್ಲಾ ಎನ್ನುತ್ತಿದ್ದಾರೆ ಸಂತ್ರಸ್ತರು.

sangayya

ಇತ್ತೀಚಿನದು Live TV
corona virus btn
corona virus btn
Loading