ಬೆಂಗಳೂರು (ಮಾ. 17): ಮೊದಲು ಕೊರೋನಾ ಸೋಂಕು ನಿಗ್ರಹವಾಗಲಿ, ನಂತರ ಬಜೆಟ್ ಅಧಿವೇಶನ ಮಾಡಿದರಾಯಿತು. ಅಲ್ಲಿಯವರೆಗೆ ಸದನ ಮುಂದೂಡಿ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಇಂದು ವಿಧಾನಸಭೆಯಲ್ಲಿ ಆಗ್ರಹ ಮಾಡಿದರು. ನಮ್ಮ ತಾತ, ಮುತ್ತಾತರ ಕಾಲದಲ್ಲಿ ಪ್ಲೇಗ್ನಿಂದ ಒಂದೊಂದು ಮನೆಯಲ್ಲಿ ಏಳೆಂಟು ಜನರು ಸಾಯುತ್ತಿದ್ದರು. ಈಗ ಕೊರೋನಾ ಬಂದಿದೆ. ವಿಜ್ಞಾನಿಗಳು ಇನ್ನೂ ಔಷಧಿ ಕಂಡುಹಿಡಿದಿಲ್ಲ.