ಹೋಮ್ » ವಿಡಿಯೋ » ರಾಜ್ಯ

ಸಿಎಂ ಸಿದ್ದರಾಮಯ್ಯಗೆ ಚಿಂಪಾಂಜಿ ಮುಖ: ವಾಟ್ಸಾಪ್ನಲ್ಲಿ ಜಿಫ್ ವಿಡಿಯೋ ವಿವಾದ

ರಾಜ್ಯ04:24 PM IST Jan 10, 2018

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಿಳಾ ಕಾಂಗ್ರೆಸ್ನ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಸಿಎಂಗೆ ಅವಮಾನಕಾರಿಯಾದ ಜಿಫ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಮೋಹನ್ ಹಿರೇಮನಿ ಹಾಕಿದ ಈ ವಿಡಿಯೋದಲ್ಲಿ ಸಿದ್ದರಾಮಯ್ಯನವರ ಮುಖವನ್ನು ಚಿಂಪಾಂಜಿಯಾಗಿ ಪರಿವರ್ತಿಸಲಾಗಿದೆ. ಸಂತೋಷ್ ಲಾಡ್, ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ್ರಂತಹ ಮುಖಂಡರು ಇರುವ ಈ ಗ್ರೂಪ್ನಲ್ಲಿ ಇಂಥದ್ದೊಂದು ಅವಮಾನಕಾರಿ ವಿಡಿಯೋ ಪೋಸ್ಟ್ ಮಾಡಿದ ಮೋಹನ್ ಹಿರೇಮನಿಯವರನ್ನು ಕೂಡಲೇ ಗ್ರೂಪ್ನಿಂದ ತೆಗೆದುಹಾಕಲಾಗಿದೆ. ಜೊತೆಗೆ, ಮೋಹನ್ ಅವರನ್ನು ಕರೆಸಿ ತರಾಟೆ ಕೂಡ ತೆಗೆದುಕೊಳ್ಳಲಾಗಿದೆ. ಇನ್ನು, ಈ ಬಗ್ಗೆ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಕಾರ್ಪೊರೇಟರ್ ಮೋಹನ್ ಹಿರೇಮನಿಯವರು ತಾನು ಈ ವಿಡಿಯೋ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಗುರುಗಳು. ಪಕ್ಷದ ಹಿರಿಯ ಮುಖಂಡರು, ಅವರ ಬಗ್ಗೆ ತಾನು ಇಂಥ ವಿಡಿಯೋ ಹಾಕಲು ಸಾಧ್ಯವೇ ಎಂದು ಹಿರೇಮನಿ ಅಳಲು ತೋಡಿಕೊಂಡಿದ್ದಾರೆ. ನಾನು ಮೊಬೈಲ್ನಲ್ಲಿ ಎಕ್ಸ್ಪರ್ಟ್ ಅಲ್ಲ. ಇಂಥದ್ದನ್ನು ನಾನು ಕಳುಹಿಸಲು ಸಾಧ್ಯವಿಲ್ಲ. ನಿನ್ನೆ ನಾನು ಮೀಟಿಂಗ್ನಲ್ಲಿದ್ದೆ. ಆಗ ಯಾರೋ ಈ ಕೆಲಸ ಮಾಡಿರಬಹುದು. ಅಲ್ಲದೇ ನಾನು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲೂ ಯಾರೋ ಬೇಕಂತಲೇ ನನ್ನ ಹೆಸರಿಗೆ ಮಸಿ ಬಳಿಯಲು ಈ ಕೆಲಸ ಮಾಡಿರಬಹುದು ಎಂದು ಮೋಹನ್ ಹಿರೇಮನಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿವುದಾಗಿ ತಿಳಿಸಿದ್ದಾರೆ.

webtech_news18

ಇತ್ತೀಚಿನದು Live TV