News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗಿದ್ದೇ ಯಡವಟ್ಟಾಗಿರಬಹುದು: ಹೆಚ್. ವಿಶ್ವನಾಥ್ ಸಂಶಯ

ರಾಜ್ಯ07:17 PM IST May 24, 2019

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆಯೇ ರಾಜೀನಾಮೆ ನೀಡಲು ಮುಂದಾಗಿದ್ದ ಹೆಚ್. ವಿಶ್ವನಾಥ್ ತಮ್ಮ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆದುಕೊಂಡಿರುವಂತಿದೆ. ದೇವೇಗೌಡರು ಸೋಲಿನ ನೋವಿನಲ್ಲಿರುವುದರಿಂದ ಈ ಸಂದರ್ಭದಲ್ಲಿ ತಾನು ರಾಜೀನಾಮೆ ನೀಡುವುದು ಸರಿಯಲ್ಲ ಎಂದು ಹೆಚ್. ವಿಶ್ವನಾಥ್ ಅಭಿಪ್ರಾಯಪಟ್ಟರು. ಇದೇ ವೇಳೆ, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಿನ್ನಡೆಯಾಗಲು ಏನು ಕಾರಣ ಎಂಬುದನ್ನು ಜೆಡಿಎಸ್ ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಲಿಲ್ಲ. ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗಿದ್ದೇ ಯಡವಟ್ಟು ಎಂದು ಎಲ್ಲರೂ ಹೇಳುತ್ತಾರೆ ಎಂದು ಪರೋಕ್ಷವಾಗಿ ಮೈತ್ರಿಯ ನಿರ್ಧಾರವನ್ನು ಅವರು ವಿರೋಧಿಸಿದರು. ಅದೇ ಉಸುರಿನಲ್ಲಿ ಅವರು ಮೈತ್ರಿ ಸರಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಕುಮಾರಸ್ವಾಮಿ ಸರಕಾರ ಮುಂದುವರಿಯುತ್ತದೆ ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದರು.

sangayya

ಇತ್ತೀಚಿನದು Live TV